ಕಾಲ್ ಭೈರವ್ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಉಜ್ಜೆಯನ್ ನಗರದಲ್ಲಿ ಸ್ಥಿತವಾಗಿರುವ ಹಿಂದೂ ದೇವಾಲಯವಾಗಿದೆ. ಇದು ಈ ನಗರದ ಅಧಿದೇವತೆಯಾದ ಕಾಳ ಭೈರವನಿಗೆ ಸಮರ್ಪಿತವಾಗಿದೆ. ಶಿಪ್ರಾ ನದಿಯ ತಟದಲ್ಲಿ ಸ್ಥಿತವಾಗಿರುವ ಇದು ನಗರದಲ್ಲಿನ ಅತ್ಯಂತ ಸಕ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ದಿನವೂ ನೂರಾರು ಭಕ್ತರು ಇದಕ್ಕೆ ಭೇಟಿನೀಡುತ್ತಾರೆ. ಈ ದೇವಾಲಯದ ದೇವತೆಗೆ ಅರ್ಪಿಸಲಾದ ವಸ್ತುಗಳಲ್ಲಿ ಸಾರಾಯಿ ಕೂಡ ಒಂದು. ಇಂದಿನ ದೇವಾಲಯ ರಚನೆಯನ್ನು ಒಂದು ಹಿಂದಿನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಮೂಲ ದೇವಾಲಯವನ್ನು ಭದ್ರಸೇನನೆಂಬ ಒಬ್ಬ ಅಸ್ಪಷ್ಟ ರಾಜನು ಕಟ್ಟಿಸಿದನ್ನು ಎಂದು ನಂಬಲಾಗಿದೆ. ಇದನ್ನು ಸ್ಕಂದ ಪುರಾಣದಅವಂತಿ ಖಂಡದಲ್ಲಿ ಉಲ್ಲೇಖಿಸಲಾಗಿದೆ. ಪರಮಾರರ ಅವಧಿಗೆ (ಕ್ರಿ.ಶ. ೯ - ೧೩ನೇ ಶತಮಾನ) ಸೇರಿದ ಶಿವ, ಪಾರ್ವತಿ, ವಿಷ್ಣು ಮತ್ತು ಗಣೇಶನ ವಿಗ್ರಹಗಳನ್ನು ಈ ಸ್ಥಳದಿಂದ ಪಡೆಯಲಾಗಿದೆ. == ಉಲ್ಲೇಖಗಳು ==